![]() |
![]() |
![]() |
ಮಾಹಿತಿ ಹಕ್ಕು ಕಾಯ್ದೆ - 2005 |
![]() |
||
ಕರ್ನಾಟಕ
ಎನ್.ಆರ್.ಡಿ.ಎಂ.ಎಸ್ |
ಕರ್ನಾಟಕ
ಜಿಯೋಪೋರ್ಟಲ್
|
||
ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಚಾಲ್ತಿಯಲ್ಲಿರುವ ಯೋಜನೆಗಳು
ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ವೀಡಿಯೊ ಸ್ಟ್ರೀಮಿಂಗ್ / ಟೆಕ್ ಟಾಕ್ - ಸರ್ವರ್ ಲಿಂಕ್
ಮುಖ್ಯ ಪ್ರಕಟಣೆ
ದಿನಾಂಕ : 2ನೇ ಮಾರ್ಚ್ 2021
ಸಮಯ : ಬೆಳಗ್ಗೆ 9.30ರಿಂದ 11.45ರವರೆಗೆ
ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
|
ಸಂಕ್ಷಿಪ್ತ ಅವಲೋಕನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ (ಕೆಎಸ್‌ಸಿಎಸ್‌ಟಿ)ಯು 1975ರಲ್ಲಿ ಸ್ಥಾಪಿತವಾಯಿತು ರಾಜ್ಯದಲ್ಲಿನ ಜನರ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಜನರ, ಜೀವನಮಟ್ಟವನ್ನು ಉತ್ತಮಗೊಳಿಸುವದಕ್ಕೆ ಸಂಬಂಧಿಸಿದ ಅಭಿವೃಧ್ಧಿಕಾರ್ಯಗಳನ್ನು ಕೈಗೊಳ್ಳುವುದು ಮಂಡಳಿಯ ಸ್ಥಾಪನೆಗೆ ಕಾರಣವಾಗಿದೆ. 54 ಸದಸ್ಯರನ್ನೊಳಗೊಂಡ ಮಂಡಳಿಯು ಒಂದು ಸ್ವಾಯತ್ತ ಸಂಸ್ಥೆಯಾಗಿದೆ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಇದರ ಸಲಹಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮಂಡಳಿಯ ಉಪಾಧ್ಯಕ್ಷರಲ್ಲೊಬ್ಬರಾಗಿರುತ್ತಾರೆ ಹಾಗೂ ಇವರು ಕಾರ್ಯಕಾರಿ ಸಮಿತಿಯ ಛೇರ್ಮನ್ ಆಗಿರುತ್ತಾರೆ. ಕಾರ್ಯಕಾರಿ ಸಮಿತಿಯು ಮಂಡಳಿಯ ಆಡಳಿತ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ ಮತ್ತು ಆಡಳಿತ ಸಿಬ್ಬಂದಿ ಇದಕ್ಕೆ ಸಹಾಯಕವಾಗಿದೆ. ಪ್ರಸ್ತುತವಿರುವ ಬಡತನ ಮತ್ತು ನಿರುದ್ಯೊಗಕ್ಕೆ ಸಂಬಂಧಪಟ್ಟಂತೆ ರಾಜ್ಯದ ಅಭಿವೃದ್ಧಿಗೆ ಅವಶ್ಯಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯಿಕತೆಗಳನ್ನು ಗುರುತಿಸಿವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನೀತಿ-ನಿಯಮಾವಳಿಗಳನ್ನು ನಿರೂಪಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶಗಳನ್ನು ಸಾಧಿಸಲು ಕೈಗಾರಿಕೆ, ಮಾಹಿತಿ, ಕೃಷಿ ನೀರು ಮತ್ತು ಮೀನುಗಾರಿಕೆ, ಪರಿಸರ ಸಂರಕ್ಷಣೆ ಮತ್ತು ವಿಜ್ಞಾನ ನೆಲೆಸುವಿಕೆ, ಆರೋಗ್ಯ ಮತ್ತು ಶಿಕ್ಷಣ ಮುಂತಾದ ವಿಷಯಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಮುಖ್ಯ ಕಾರ್ಯಕ್ಷೇತ್ರವನ್ನಾಗಿ ಮಂಡಳಿಯು ಆರಿಸಿಕೊಂಡಿದೆ. ಮಂಡಳಿಯು ಕಳೆದ ಮೂರು ದಶಕಗಳಲ್ಲಿ ಹಲವಾರು ಯೋಜನೆಗಳನ್ನು ಸಂಶೋಧನೆ ಮತ್ತು ಪ್ರಾತ್ಯಕ್ಷಿಕತೆ ಹಂತದಿಂದ ಅನುಷ್ಠಾನ ಮತ್ತು ಕಾರ್ಯರೂಪಕ್ಕೆ ತಂದಿದೆ. ಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ರಾಜ್ಯದ ಜನಸಾಮಾನ್ಯರಿಗೆ ಕೊಂಡೊಯ್ಯುವ ಮಂಡಳಿಯ ಹಲವಾರು ಕಾರ್ಯಕ್ರಮಗಳ ಯಶಸ್ಸಿಗೆ ಬಹುಮಟ್ಟಿಗೆ ಕಾರಣವಾಗಿದೆ. ಇದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಜೊತೆಗಿನ ಸಂಬಂಧ ಮತ್ತು ಸಹಕಾರಗಳಿಗೆ ಸಮರ್ಪಕವಾದ ವಾತಾವರಣವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿರುವ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿನ ವಿಜ್ಞಾನಿಗಳ ಜೊತೆಗೆ ಸಂಬಂಧವನ್ನು ಕಲ್ಪಿಸುತ್ತದೆ. ದೇಶದಲ್ಲಿ ಸ್ಥಾಪಿತವಾದ ಎಲ್ಲ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಗಳಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು ಮೊದಲನೆಯದಾಗಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ಇತರ ರಾಜ್ಯಗಳಿಗೆ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯನ್ನು ಒಂದು ಮಾದರಿಯನ್ನಾಗಿ ಅನುಸರಿಸಲು ಶಿಫಾರಸು ಮಾಡಿದೆ. ಮಂಡಳಿಯು ಸ್ಥಾಪನೆಯಾದ 6 ವರ್ಷದ ನಂತರವೇ ಅಂದರೆ 1981ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಚನೆ ಮಾಡಿತು. ಮಂಡಳಿಯು ಕಳೆದ ಮೂರು ದಶಕಕ್ಕೂ ಹೆಚ್ಚಿನ ತನ್ನ ಅಸ್ತಿತ್ವದಲ್ಲಿ ಸರ್ಕಾರ ಮತ್ತು ವಿಜ್ಞಾನ ಸಮುದಾಯದ ಸಹಕಾರದಿಂದ ಹಲವಾರು ಯಶಸ್ವಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕೈಗೊಂಡಿದೆ ಮತ್ತು ಕೈಗೊಳ್ಳಲು ಇತರ ಸಂಸ್ಥೆಗಳಿಗೆ ಸಹಕಾರ ನೀಡಿದೆ. ಅಡುಗೆ ಮಾಡಲು ಮತ್ತು ಬೆಳಕಿನ ವ್ಯವಸ್ಥೆಗೆ ಶಕ್ತಿ, ಕುಡಿಯುವ ನೀರು, ಕೃಷಿ, ವ್ಯವಸಾಯ, ನೆಲೆಸಲು ಮನೆಗಳ ನಿರ್ಮಾಣ, ಮೊದಲಾದುವುಗಳು ಮಂಡಳಿಯ ಹಲವಾರು ಯಶಸ್ವಿ ಯೋಜನೆ / ಕಾರ್ಯಕ್ರಮಗಳಲ್ಲಿ ಮುಖ್ಯವಾದುವು. ಬಡತನದ ನಿವಾರಣೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳು ಅತಿಮುಖ್ಯ ಪಾತ್ರವನ್ನು ವಹಿಸುತ್ತವೆ.
| ||
|
|||
|
(for KSCST officials only) |
(for KSCST officials only) |
![]() |
AQUITAINE-KARNATAKA Click on this link for details
|
This page was updated on : Wednesday, February 17, 2021 03:55 PM
|
|
|
|
|
|
|
|
|
|
|
|
This website is visited times since January 2007
|
|
|
|
This site is best viewed using
Google Chrome / Microsoft Edge / Mozilla Firefox Copyright : Karnataka
State Council for Science and Technology
|
|
|